ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ವಾರಣಾಸಿ ಪ್ರವಾಸದಲ್ಲಿದ್ದಾರೆ. ವಿಶ್ವನಾಥನ ದರ್ಶನ ಪಡೆದು ಗಂಗೆ ಪೂಜೆ ಬಳಿಕ ನರೇಂದ್ರ ಮೋದಿ ಮೇ 30 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮಧ್ಯೆ ಮೋದಿ ಸಂಪುಟದಲ್ಲಿ ಯಾರು ಸ್ಥಾನ ಪಡೆಯಲಿದ್ದಾರೆಂಬ ಚರ್ಚೆ ಚುರುಕು ಪಡೆದಿದೆ.
ಈ ಬಾರಿ ಮೋದಿ ಕ್ಯಾಬಿನೆಟ್ ನಲ್ಲಿ ಕೆಲ ಹೊಸ ಪಕ್ಷಗಳ ಸದಸ್ಯರು ಜಾಗ ಪಡೆಯಲಿದ್ದಾರೆ ಎನ್ನಲಾಗ್ತಿದೆ. ಎಐಎಡಿಎಂಕೆ, ಜೆಡಿಯು ಸೇರಿದಂತೆ ಪಶ್ಚಿಮ ಬಂಗಾಳ ಹಾಗೂ ತೆಲಂಗಾಣದ ಸಣ್ಣ ಪಕ್ಷಗಳಿಗೂ ಮೋದಿ ಮಹತ್ವ ನೀಡಲಿದ್ದಾರೆ ಎನ್ನಲಾಗ್ತಿದೆ. ಅನೇಕ ಹೊಸ ಸದಸ್ಯರು ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
ಈ ಬಾರಿ ರಾಜ್ಯದಿಂದ 25 ಕ್ಷೇತ್ರದಲ್ಲಿ ಗೆಲುವು ಸಾಧಿಸಿ ಮೋದಿ ಅವರಿಗೆ ಬಹಳ ಖುಷಿ ಕೊಟ್ಟ ರಾಜ್ಯವಾಗಿದೆ ಆದ್ರಿಂದ ಕರ್ನಾಟಕಕ್ಕೆ ಬಂಪರ್ ಆಫರ್ ಕೊಡಲು ಮೋದಿ ಅವರು ಮುಂದಾಗಿದ್ದು ಹಾಗಾಗಿ ಕರ್ನಾಟಕದಿಂದ ಮೋದಿ ಕ್ಯಾಬಿನೆಟ್ನಲ್ಲಿ 2 ರಿಂದ 3 ಸಂಸದರು ಆಯ್ಕೆ ಆಗುವ ಸಾಧ್ಯತೆ ಇವೆ
ಹಿಂದಿನ ಕ್ಯಾಬಿನೆಟ್ ನಲ್ಲಿದ್ದ ಕೆಲ ಸದಸ್ಯರು ಹೊಸ ಕ್ಯಾಬಿನೆಟ್ ನಲ್ಲಿಯೂ ಸ್ಥಾನ ಪಡೆಯಲಿದ್ದಾರೆ. ಮೂಲಗಳ ಪ್ರಕಾರ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್, ನರೇಂದ್ರ ಸಿಂಗ್ ತೋಮರ್ ಮತ್ತು ಪ್ರಕಾಶ್ ಸಿಂಗ್ ಕಳೆದ ಕ್ಯಾಬಿನೆಟ್ ನ ಹಿರಿಯ ಮುಖಗಳಾಗಿದ್ದು, ಈ ಬಾರಿಯೂ ಸ್ಥಾನ ಪಡೆಯಲಿದ್ದಾರೆ. ಗಾಂಧಿನಗರದಿಂದ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಮುಖ್ಯಸ್ಥ ಅಮಿತ್ ಷಾ ಕೂಡ ಹೊಸ ಕ್ಯಾಬಿನೆಟ್ ನಲ್ಲಿ ಪ್ರಮುಖ ಹುದ್ದೆ ಪಡೆಯಲಿದ್ದಾರೆ.

Home minister ಯಾರು
ReplyDelete