ಲೋಕಸಭಾ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿರೋ ಬೆನ್ನಲ್ಲೇ ಕಾಂಗ್ರೆಸ್ ಗೆ ಮತ್ತೊಂದು ಆಘಾತವುಂಟಾಗಿದೆ. ಫಲಿತಾಂಶದ ದಿನವಾದ ಇಂದು ಮತಎಣಿಕೆ ಕೇಂದ್ರದಲ್ಲೇ ಕಾಂಗ್ರೆಸ್ನ ಸೆಹೊರ್ ಜಿಲ್ಲಾ ಮುಖ್ಯಸ್ಥ ರತನ್ ಸಿಂಗ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೆಳಗಿನ ಹಾಗೂ ಮೇಲಿರುವ ಪ್ರಧಾನಿ ಅವರ ಭಾವಚಿತ್ರ ಒತ್ತಿ ಪ್ರಧಾನಿ ಪ್ರಮಾಣ ವಚನ ನೇರವಾಗಿ ನೋಡುವ ಅವಕಾಶ ಪಡೆಯಿರಿ
ಮತ ಎಣಿಕೆ ಕೇಂದ್ರದಲ್ಲಿ ಮಾಹಿತಿ ಕಲೆ ಹಾಕಲು ಸಿಂಗ್ ತೆರಳಿದ್ದರು. ಈ ವೇಳೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಇದು ಕಾಂಗ್ರೆಸ್ ನಾಯಕರಿಗೆ ಬರಸಿಡಿಲು ಬಡಿದಂತಾಗಿದೆ. ಇತ್ತೀಚೆಗೆ ಕೊನೆಗೊಂಡಿದ್ದ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಗಿತ್ತು. ಆದ್ರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಫ್ಲಾಪ್ ಶೋ ಮಾಡಿದೆ.
Comments
Post a Comment