ಸರ್ಕಾರ ಬೇಕೋ ಬೇಡವೋ ಎಂದು ಕಾಂಗ್ರೆಸಿಗರಿಗೆ ಹೊಡೆದು ಕೇಳಿದ ದೇವೇಗೌಡ


ಪ್ರತಿದಿನ ಎಳೆದಾಟ ಸಾಧ್ಯವಿಲ್ಲ, ಸರ್ಕಾರ ಬೇಕೋ ಬೇಡವೋ ಹೇಳಿ; ಕಾಂಗ್ರೆಸ್​​ಗೆ ದೇವೇಗೌಡ ಖಡಕ್​ ಸಂದೇಶ
ದಿನಬೆಳಗಾದರೆ ಆಪರೇಷನ್​ ಭೀತಿಯಲ್ಲೇ ಸರ್ಕಾರ ಸಾಗುತ್ತಿರುವುದನ್ನು ಕಂಡು ಮಾಜಿ ಪ್ರಧಾನಿ ಎಚ್​ ಡಿ ದೇವೇಗೌಡ ಅವರು ಕೆಂಡಾಮಂಡಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ
ವಿಧಾನಸಭೆ ಚುನಾವಣೆ ನಡೆದು ಕಾಂಗ್ರೆಸ್​ - ಜೆಡಿಎಸ್​ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಎರಡೂ ಪಕ್ಷಗಳ ನಡುವೆ ಭಿನ್ನಮತದ ಆಗಾಗ ಭುಗಿಲೇಳುತ್ತಲೇ ಇದೆ. ಅದರಲ್ಲೂ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದ ನಂತರ ಕರ್ನಾಟಕ ಸಮ್ಮಿಶ್ರ ಸರ್ಕಾರ ಉಳಿಯಲು ಸಾಧ್ಯವೇ ಇಲ್ಲ ಎಂಬಂತ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಆಪರೇಷನ್​ ಕಮಲದ ಭೀತಿಯಾದರೆ ಇನ್ನೊಂದೆಡೆ ಕಾಂಗ್ರೆಸ್​ ಪಕ್ಷದ ಅತೃಪ್ತ ಶಾಸಕರು ಪದೇ ಪದೇ ಬಂಡಾಯದ ಕಹಳೆ ಮೊಳಗಿಸುತ್ತಲೇ ಇದ್ದಾರೆ.

Comments