ನವದೆಹಲಿ[ಮೇ.31]: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಮೇ.30ರಂದು ಪ್ರಧಾನಿ ನರೇಂದ್ರ ಮೋದಿ ಹಾಗೂ 57 ಮಂದಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದರ ಬೆನ್ನಲ್ಲೇ ಯಾರಿಗೆ ಯಾವ ಖಾತೆ ಎಂಬ ಕುತೂಹಲ ಮೂಡಿತ್ತು. ಆದರೀಗ ಈ ಎಲ್ಲಾ ಕುತೂಹಲಕ್ಕೆ ತೆರೆ ಬಿದ್ದಿದೆ.
ನರೇಂದ್ರ ಮೋದಿ: ಪ್ರಧಾನ ಮಂತ್ರಿ
ಕ್ಯಾಬಿನೆಟ್ ದರ್ಜೆ ಸಚಿವರು
ರಾಜನಾಥ್ ಸಿಂಗ್: ರಕ್ಷಣಾ ಇಲಾಖೆ
ಅಮಿತ್ ಶಾ: ಗೃಹ ಇಲಾಖೆ
ನಿತಿನ್ ಗಡ್ಕರಿ: ಭೂಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಖಾತೆ/ ಸಣ್ಣ, ಅತಿಸಣ್ಣ, ಮಧ್ಯಮ ಕೈಗಾರಿಕೆಗಳ ಖಾತೆ
ಡಿ.ವಿ.ಸದಾನಂದಗೌಡ- ರಸಗೊಬ್ಬರ ಮತ್ತು ರಾಸಾಯನಿಕ (ದಿ.ಅನಂತಕುಮಾರ್ ನಿಭಾಯಿಸುತ್ತಿದ್ದ ಖಾತೆ)
ನಿರ್ಮಲಾ ಸೀತಾರಾಮನ್: ವಿತ್ತ, ಕಾರ್ಪೊರೇಟ್ ವ್ಯವಹಾರ
ರಾಮವಿಲಾಸ್ ಪಾಸ್ವಾನ್ - ಆಹಾರ ಮತ್ತು ನಾಗರಿಕ ಪೂರೈಕೆ
ನರೇಂದ್ರ ಸಿಂಗ್ ಥೋಮರ್ - ಕೃಷಿ ಹಾಗೂ ರೈತರ ಕಲ್ಯಾಣ/ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್
ರವಿ ಶಂಕರ್ ಪ್ರಸಾದ್: ಕಾನೂನು ಮತ್ತು ನ್ಯಾಯ/ ಸಂಪರ್ಕ ಖಾತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ.
ಹರ್‌ಸಿಮ್ರತ್ ಕೌರ್ ಬಾದಲ್: ಆಹಾರ ಸಂಸ್ಕರಣೆ
ಥಾವರ್ ಚಂದ್ ಗೆಹ್ಲೋಟ್: ಸಾಮಾಜಿಕ ನ್ಯಾಯ, ಸಬಲೀಕರಣ
ಡಾ. ಸುಬ್ರಹ್ಮಣ್ಯನ್ ಜೈಶಂಕರ್- ವಿದೇಶಾಂಗ ಖಾತೆ
ರಮೇಶ್ ಪೋಖ್ರಿಯಾಲ್- ಮಾನವ ಸಂಪನ್ಮೂಲ ಇಲಾಖೆ
ಅರ್ಜುನ್ ಮುಂಡಾ- ಬುಡಕಟ್ಟು ವ್ಯವಹಾರ
ಸ್ಮೃತಿ ಝುಬಿನ್ ಇರಾನಿ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಜವುಳಿ
ಡಾ. ಹರ್ಷವರ್ಧನ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ/ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ
ಪ್ರಕಾಶ್ ಜಾವಡೇಕರ್- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ/ ವಾರ್ತಾ ಮತ್ತು ಪ್ರಸಾರ ಖಾತೆ
ಪಿಯೂಷ್ ಗೋಯಲ್- ರೈಲ್ವೇ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ
ಧರ್ಮೇಂದ್ರ ಪ್ರಧಾನ್- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಹಾಗೂ ಉಕ್ಕು ಖಾತೆ
ಮುಖ್ತಾರ್ ಅಬ್ಬಾಸ್ ನಖ್ವಿ- ಅಲ್ಪಸಂಖ್ಯಾತ ವ್ಯವಹಾರ
ಪ್ರಹ್ಲಾದ್ ಜೋಷಿ- ಸಂಸದೀಯ ವ್ಯವಹಾರಗಳು/ ಕಲ್ಲಿದ್ದಲು ಮತ್ತು ಗಣಿ ಖಾತೆ
ಡಾ. ಮಹೇಂದ್ರನಾಥ್ ಪಾಂಡೆ- ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ
ಅರವಿಂದ ಗಣಪತ್ ಸಾವಂತ್- ಭಾರಿ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮ
ಗಿರಿರಾಜ್ ಸಿಂಗ್- ಜಾನುವಾರು ಮೇವು, ಹೈನುಗಾರಿಕೆ ಮತ್ತು ಮೀನುಗಾರಿಕೆ
ಗಜೇಂದ್ರ ಸಿಂಗ್ ಶೇಖಾವತ್- ಜಲಶಕ್ತಿ ಖಾತೆ.
ರಾಜ್ಯ ಸಚಿವರು (ಸ್ವತಂತ್ರ ನಿರ್ವಹಣೆ)
ಸಂತೋಷ್ ಕುಮಾರ್ ಗಂಗ್ವಾರ್- ಕಾರ್ಮಿಕ ಮತ್ತು ಉದ್ಯೋಗ ಖಾತೆ ಸಹಾಯಕ ಸಚಿವರು
ರಾವ್ ಇಂದ್ರಜಿತ್ ಸಿಂಗ್- ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ/ಯೋಜನಾ ಖಾತೆ ಸಹಾಯ ಸಚಿವರು
ಶ್ರೀಪಾದ ಯಸ್ಸೋ ನಾಯಕ್- ಆಯುರ್ವೇದ, ಯೋಗ, ನ್ಯಾಚುರೋಪಥಿ, ಯುನಾನಿ, ಸಿದ್ಧ ಮತ್ತು ಹೋಮಿಯೋಪಥಿ (ಆಯುಷ್) ಹಾಗೂ ರಕ್ಷಣಾ ಖಾತೆ ಸಹಾಯಕ ಸಚಿವರು
ಡಾ. ಜಿತೇಂದ್ರ ಸಿಂಗ್- ಈಶಾನ್ಯ ಪ್ರಾಂತ್ಯದ ಅಭಿವೃದ್ಧಿ ಖಾತೆ ಸಹಾಯಕ ಸಚಿವರು/ ಪ್ರಧಾನಿ ಕಾರ್ಯಾಲಯದ ಸಹಾಯಕ ಸಚಿವರು, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಹಾಯಕ ಸಚಿವರು/ ಅಣುಶಕ್ತಿ ಇಲಾಖೆ ಸಹಾಯಕ ಸಚಿವರು ಮತ್ತು ಬಾಹ್ಯಾಕಾಶ ಇಲಾಖೆ ಸಹಾಯಕ ಸಚಿವರು
ಕಿರಣ್ ರೆಜಿಜು- ಯುವಜನ ವ್ಯವಹಾರ ಮತ್ತು ಕ್ರೀಡೆ/ ಅಲ್ಪಸಂಖ್ಯಾತ ವ್ಯವಹಾರಗಳ ಸಹಾಯಕ ಸಚಿವರು,
ಪ್ರಹ್ಲಾದ್ ಸಿಂಗ್ ಪಟೇಲ್- ಸಂಸ್ಕೃತಿ ಖಾತೆ ಸಹಾಯಕ ಸಚಿವರು/ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವರು
ರಾಜ್‌ಕುಮಾರ್ ಸಿಂಗ್- ವಿದ್ಯುತ್ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ), ನವೀನ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವರು (ಸ್ವತಂತ್ರ ನಿರ್ವಹಣೆ), ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಹಾಯಕ ಸಚಿವರು.
ಹರ್‌ದೀಪ್ ಸಿಂಗ್ ಪುರಿ- ಗೃಹ ಮತ್ತು ನಗರ ವ್ಯವಹಾರಗಳ ಖಾತೆ ಸಹಾಯಕ ಸಚಿವರು/ ನಾಗರಿಕ ವಿಮಾನಯಾನ ರಾಜ್ಯಸ ಚಿವರು / ವಾಣಿಜ್ಯ ಮತ್ತು ಉದ್ಯಮ ಖಾತೆ ಸಹಾಯಕ ಸಚಿವರು
ಮನ್‌ಸುಖ್ ಎಲ್ ಮಾಂಡವೀಯ- ಹಡಗು ಖಾತೆ ರಾಜ್ಯ ಸಚಿವರು/ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಹಾಯಕ ಸಚಿವರು

Comments
Post a Comment