ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು ನಂ.1 ಭ್ರಷ್ಟಾಚಾರಿಯೆಂಬ ಕಳಂಕಹೊತ್ತುಕೊಂಡೇ ಅಂತ್ಯಕಂಡರು ಎಂದು ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದರು. ರಫೇಲ್ ಒಪ್ಪಂದದ ಕುರಿತಂತೆ ರಾಹುಲ್ ಗಾಂಧಿ ಪದೇಪದೆ ನರೇಂದ್ರ ಮೋದಿಯವರ ವಿರುದ್ಧ ಆರೋಪ ಮಾಡುತ್ತಿರುವ ಬೆನ್ನಲ್ಲೇ ಮೋದಿಯವರು ರಾಜೀವ್ ಗಾಂಧಿಯವರನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ರಾಜೀವ್ ಗಾಂಧಿ ಭ್ರಷ್ಟಾಚಾರಿಯಾಗಿದ್ದರು ಎಂದು ನರೇಂದ್ರ ಮೋದಿಯವರು ಹೇಳಿಕೆ ನೀಡುತ್ತಲೇ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಹಲವು ಕಾಂಗ್ರೆಸ್ ಮುಖಂಡರು, ವಿವಿಧ ಪ್ರತಿಪಕ್ಷಗಳ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಕ್ರಿಯೆ ನೀಡಿದ್ದರು. ಈಗ ಮತ್ತೆ ನರೇಂದ್ರ ಮೋದಿಯವರು ರಾಜೀವ್ ಗಾಂಧಿ ವಿಚಾರ ಮುಂದಿಟ್ಟು ಕಾಂಗ್ರೆಸ್ ಪಕ್ಷಕ್ಕೆ ಸವಾಲೊಂದನ್ನು ಹಾಕಿದ್ದಾರೆ.
ಜಾರ್ಖಂಡ್ನ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ನರೇಂದ್ರ ಮೋದಿ, ಕಾಂಗ್ರೆಸ್ಗೆ ತಾಕತ್ತಿದ್ದರೆ ಬೊಫೊರ್ಸ್ ಪಿರಂಗಿ ಖರೀದಿ ಹಗರಣದ ಆರೋಪಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹೆಸರಿನಲ್ಲಿ ಮುಂದಿನ ಎರಡು ಹಂತದ ಚುನಾವಣೆ ಎದುರಿಸಲಿ ಎಂದಿದ್ದಾರೆ. ನರೇಂದ್ರ ಮೋದಿಯವರು ಕಾಂಗ್ರೆಸ್ ಗೆ ಹಾಕಿರುವ ಈ ಸವಾಲನ್ನು ಕಂಡು ಕೈ ನಾಯಕರು ಸುಸ್ತಾಗಿದ್ದಾರೆ.


Comments
Post a Comment