3 TMC ಶಾಸಕರು , 50 ಕೌನ್ಸಿಲರಗಳು ಬಿಜೆಪಿ ಸೇರ್ಪಡೆ, ನೆಲಕ್ಕೆ ಬೀಳುವ ಹಂತದಲ್ಲಿ ಮಮತಾ ಬ್ಯಾನರ್ಜಿ ಸೈನ್ಯ


ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಪಶ್ಚಿಮ ಬಂಗಾಳದ ಮೂವರು ತೃಣಮೂಲ ಕಾಂಗ್ರೆಸ್‌ ಪಕ್ಷದ ಶಾಸಕರು ಮತ್ತು 50 ಕ್ಕೂ ಹೆಚ್ಚು ಮಂದಿ ಕೌನ್ಸಿಲರ್‌ಗಳು ದೆಹಲಿಯಲ್ಲಿ ಮಂಗಳವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಲೋಕಸಭಾ ಚುನಾವಣಾ ಫ‌ಲಿತಾಂಶದಲ್ಲಿ ಭರ್ಜರಿ ಸಾಧನೆ ಮಾಡಿದ್ದ ಬಿಜೆಪಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್‌ತೊಂದು ಶಾಕ್‌ ನೀಡಿದೆ.

ಪಕ್ಷ ಸೇರ್ಪಡೆಯಾದ ಬಳಿಕ ಜೈ ಶ್ರೀರಾಮ್‌ ಮತ್ತುಭಾರತ್‌ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗಿದರು.

ಟಿಎಂಸಿಯಿಂದ ಅಮಾನತಾಗಿದ್ದ ಮುಕುಲ್‌ ರಾಯ್‌ ಅವರ ಪುತ್ರ ಸುಭ್ರಾಂಶು ರಾಯ್‌ ಅವರು ಕೂಡ ಇದೇ ವೇಳೆ ಬಿಜೆಪಿ ಸೇರ್ಪಡೆಯಾದರು.

ಈ ರೀತಿ ಪಕ್ಷಾಂತರ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಿರಂತರವಾಗಿ ಬಂಗಾಳದಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗೀಯ ಹೇಳಿದ್ದಾರೆ.

7 ಹಂತಗಳಲ್ಲಿ ಲೋಕಸಭಾ ಚುನಾವಣೆ ನಡೆದಂತೆ ಟಿಎಂಸಿ ಮುಖಂಡರ ಬಿಜೆಪಿ ಸೇರ್ಪಡೆ ಕಾರ್ಯಕ್ರಮವೂ 7 ಹಂತಗಳಲ್ಲಿ ನಡೆಯಲಿದೆ ಎಂದು ಮುಕುಲ್‌ ರಾಯ್‌ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 2021 ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಆವಾಗ ಟಿಎಂಸಿಗೆ ವಿಪಕ್ಷ ಸ್ಥಾನಪಡೆಯುವುದೂ ಕಷ್ಟವಾಗುತ್ತದೆ ಎಂದು ರಾಯ್‌ ಹೇಳಿದರು.

ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ಬಿಜೆಪಿ 18 ನ್ನು ಗೆದ್ದುಕೊಂಡಿತ್ತು. ಟಿಎಂಸಿ 22 ಸ್ಥಾನಗಳನ್ನು ಗೆದ್ದಿತ್ತು.

Comments