C-voter ಸಮೀಕ್ಷೆ ದೇಶದಲ್ಲಿ ಇವರನ್ನು ಬಿಟ್ಟರೆ ಯಾರು ಬೇರೆ ಪ್ರಧಾನಿ ಆಗಲಾರರು, ಇಲ್ಲಿದೆ ಸಮೀಕ್ಷಾ ಸವಿವರ




ನರೇಂದ್ರ ಮೋದಿ ಅವರೇ ಭಾರತದ ಪ್ರಧಾನಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂಬುದು ಬಹುತೇಕ ಭಾರತೀಯರ ಅಭಿಪ್ರಾಯವಾಗಿದೆ. ಆದರೆ ಗೃಹಿಣಿಯರ ವಲಯದಲ್ಲಿ ಮೋದಿ ಅವರಿಗೆ ರಾಹುಲ್ ಗಾಂಧಿ ಟಕ್ಕರ್ ಕೊಟ್ಟಿದ್ದು, ಗೃಹಿಣಿಯರ ಫೆವರೆಟ್ ಆಗಿ ರಾಹುಲ್ ಹೊರ ಹೊಮ್ಮಿದ್ದಾರೆ.
ಸಿವೊಟರ್-ಐಎನ್ಎಸ್ ಪೋಲ್ ಟ್ರ್ಯಾಕರ್  ನಡೆಸಿದ ಇತ್ತೀಚಿನ ಸಮೀಕ್ಷೆಯಲ್ಲಿ 2019ರ ಬಳಿಕ ಯಾರು ಈ ದೇಶವನ್ನು ಆಳಲು ಸೂಕ್ತರು ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ದೇಶದ ಮತದಾರ ಉತ್ತರ ನೀಡಿದ್ದಾನೆ. ಬಹುತೇಕ ಭಾರತೀಯರು ಮೋದಿ ಅವರನ್ನೇ ಮತ್ತೊಮ್ಮೆ ಪ್ರಧಾನಿ ಸ್ಥಾನದಲ್ಲಿ ನೋಡಲು ಬಯಸಿದ್ದು, ಇನ್ನೂ ಕೆಲವರು ರಾಹುಲ್ ಅವರಲ್ಲಿ ಭವಿಷ್ಯದ ಪ್ರಧಾನಿಯನ್ನು ಕಂಡಿದ್ದಾರೆ.
ಅದರಂತೆ ಮೋದಿ- ರಾಹುಲ್ ನಡುವಿನ ಶೇಕಡಾವಾರು ಆಯ್ಕೆಯತ್ತ ಗಮನಹರಿಸಿದರೆ..
ಗೃಹಣಿಯರ ವಲಯ:
ನರೇಂದ್ರ ಮೋದಿ-ಶೇ.43.3
ರಾಹುಲ್ ಗಾಂಧಿ-ಶೇ.37.2
ಸರ್ಕಾರಿ ನೌಕರರ ವಲಯ:
ನರೇಂದ್ರ ಮೋದಿ-ಶೇ.61.1
ರಾಹುಲ್ ಗಾಂಧಿ-ಶೇ. 26
ಭೂಮಿ ರಹಿತ ಕೃಷ್ಇ ಕಾರ್ಮಿಕ ವಲಯ:
ನರೇಂದ್ರ ಮೋದಿ-ಶೇ. 48.2
ರಾಹುಲ್ ಗಾಂಧಿ-ಶೇ.35.4
ಸಾಮಾನ್ಯ ಕಾರ್ಮಿಕ ವಲಯ:
ನರೇಂದ್ರ ಮೋದಿ-ಶೇ.48.9
ರಾಹುಲ್ ಗಾಂಧಿ-ಶೇ.35
ನಿರುದ್ಯೋಗಿ ಯುವ ವಲಯ:
ನರೇಂದ್ರ ಮೋದಿ-ಶೇ. 63.6
ರಾಹುಲ್ ಗಾಂಧಿ-ಶೇ.26

Comments