ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವುದಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯೇತರ ಪಕ್ಷಗಳ ಬೆಂಬಲಿಗರು ನನಗೆ ಕರೆ ಮಾಡಿ ಹೇಳಿದ್ದಾರೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಬಾಂಬ್ ಸಿಡಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಗಡ್ಕರಿ, ಯಾವುದೇ ಜಾತಿ, ಧರ್ಮ, ಭಾಷೆ ಹಾಗೂ ಪಕ್ಷ ಭೇದವಿಲ್ಲದೇ ಎಲ್ಲರ ಪರ ನಾನು ದುಡಿದ್ದೇನೆ ಎಂದಿದ್ದಾರೆ. ನಾವು ದೈಹಿಕವಾಗಿ ಕಾಂಗ್ರೆಸ್ನಲ್ಲಿದ್ದೇವೆ, ಆದ್ರೆ ನಮ್ಮ ಮನಸ್ಸು ನಿಮ್ಮ ಮೇಲಿದೆ, ಡೋಂಟ್ ವರಿ ಅಂತಾ ಕೆಲ ಕಾಂಗ್ರೆಸ್ ಕಾರ್ಯಕರ್ತರು ನನ್ನ ಬಳಿ ಹೇಳಿಕೊಂಡಿದ್ದಾರೆ ಎಂದು ಗಡ್ಕರಿ ನುಡಿದಿದ್ದಾರೆ.
ವಿನಯತೆ ಹಾಗೂ ನಿಷ್ಠೆಯಿಂದ ಜನರಿಗೆ ಪಕ್ಷದ ಸಾಧನೆ ಮತ್ತು ಅಭಿವೃದ್ಧಿ ಬಗ್ಗೆ ತಿಳಿಸಿ. ಆದರೆ, ಅಹಂಕಾರದಿಂದ ಜನರ ಬಳಿ ಹೋಗಬಾರದು ಎಂದು ಕಾರ್ಯಕರ್ತರಿಗೆ ಗಡ್ಕರಿ ಸಲಹೆ ನೀಡಿದ್ದಾರೆ. ಯಾವುದೇ ಪಕ್ಷವನ್ನು ನಾನು ಟೀಕಿಸಲ್ಲ. ನಾವು ಏನು ಅಭಿವೃದ್ಧಿ ಮಾಡಿದ್ದೇವೆ ಅನ್ನುವುದರ ಕುರಿತಷ್ಟೇ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

Comments
Post a Comment