Breaking news !! ಮೈತ್ರಿ ಅಭ್ಯರ್ಥಿ ಬದಲು #ಬಿಜೆಪಿ ಪರ ಪ್ರಚಾರ ನಡೆಸಿದ ಡಿಕೆಶಿ


W
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ 'ಮೈತ್ರಿ' ಅಭ್ಯರ್ಥಿ ಹಾಗೂ ಸೋದರ ಡಿಕೆ ಸುರೇಶ್ ಪರವಾಗಿ ಸಚಿವ ಡಿಕೆ ಶಿವಕುಮಾರ್ ಇಂದು ಮತಯಾಚಿಸಿದರು.
ಸೋದರನ ಪರ ಪ್ರಚಾರ ನಡೆಸುತ್ತಿದ್ದ ಡಿಕೆಶಿ ಮಾತಿನ ಭರದಲ್ಲಿ ಬಿಜೆಪಿಗೆ ಹೆಚ್ಚು ಮತ ನೀಡಿ ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ. ಹೌದು, ಕುಣಿಗಲ್ ನಲ್ಲಿ ಶುಕ್ರವಾರ ನಡೆದ ಬೆಂಗಳೂರು ಮೈತ್ರಿ ಅಭ್ಯರ್ಥಿ ಡಿಕೆ ಸುರೇಶ್ ಪರ ಚುನಾವಣೆ ಪ್ರಚಾರ ಸಭೆಯಲ್ಲಿ ಡಿಕೆಶಿ ಎಡವಟ್ಟು ಮಾಡಿಕೊಂಡಿದ್ದಾರೆ.
ಪ್ರತಿ ಬೂತ್‌ನಲ್ಲಿಯೂ ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಕಾವಲುಗಾರರಾಗಿ ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಬಂದ ಮತಕ್ಕಿಂತ ಹೆಚ್ಚು ಮತಗಳನ್ನು ಬಿಜೆಪಿಗೆ‌ ಕೊಡಿಸಬೇಕೆಂದು ಮಾತನಾಡಿದರು. ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ‌ ವಿಡಿಯೋ ವೈರಲ್ ಅಗಿದೆ.

Comments