ದೇಶದ ರಕ್ಷಣೆಗೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಸೇನಾ ವಾಹನಗಳು ಅತ್ಯಗತ್ಯ. ದೇಶದ ಭದ್ರತೆ ಎಂಬ ವಿಷಯ ಬಂದ ಸಂಧರ್ಭದಲ್ಲಿ ಸರ್ಕಾರ ಹಾಗೂ ಸೇನಾ ಪರಿಕರಗಳನ್ನು ತಯಾರಿಸುವ ಕಂಪನಿಗಳ ನಡುವೆ ಮಹತ್ವದ ಒಪ್ಪಂದಗಳು ನಡೆದಿರುತ್ತದೆ. ಅದೇ ರೀತಿ ಭಾರತೀಯ ಸೈನಿಕರಿಗೆ ಗರಿಷ್ಠ ಪ್ರಮಾಣದಲ್ಲಿ ವಾಹನಗಳನ್ನು ನಿರ್ಮಿಸಿ ಕೊಡುತ್ತಿರುವ ಟಾಟಾ ಮೋಟರ್ಸ್ ಇತ್ತೀಚೆಗಷ್ಟೇ ವಿಶೇಷ ಟಾಟಾ ಸಫಾರಿ ಸ್ಟೋರ್ಮ್ ಆರ್ಮಿ ಕಾರುಗಳನ್ನು ಒದಗಿಸಿತ್ತು.
ಹೌದು, ಟಾಟಾ ಮೋಟರ್ಸ್ ಕಂಪೆನಿ ಭಾರತೀಯ ಸೈನಿಕರ ಸುರಕ್ಷತೆಗಾಗಿ ಮರ್ಲಿನ್ ಎಲ್ ಎಸ್ ವಿ ವಾಹನವನ್ನು ಪರಿಚಯಿಸಿದೆ. ಟಾಟಾ ಮೋಟಾರ್ಸ್ ಭಾರತೀಯ ಸೇನೆಗೆ ನೀಡಿರುವ ಮರ್ಲಿನ್ ಎಲ್ ಎಸ್ ವಿ ವಾಹನ ಗ್ರೇನೇಡ್ ದಾಳಿ, ಸಣ್ಣ ಬಾಂಬ್ ಸೇರಿದಂತೆ ಹಲವು ಅಪಾಯದ ಸಂದರ್ಭದಲ್ಲೂ ಸೈನಿಕರಿಗೆ ಸಂಪೂರ್ಣ ಭದ್ರತೆ ನೀಡಲಿರುವುದು ಈ ವಾಹನದ ವಿಶೇಷತೆ.
ಟಾಟಾ ಮರ್ಲಿನ್ ವಾಹನ ಹಲವಾರು ಭದ್ರತೆಯನ್ನು ಸೈನಿಕರಿಗೆ ನೀಡಲಿದ್ದು ಇದರಲ್ಲಿ 7.6 ಎಮ್ ಎಮ್ ಗನ್ ಹಾಗೂ 40 ಎಮ್ ಎಮ್ ಅಟೋಮ್ಯಾಟಿಕ್ ಗ್ರೇನೇಡ್, ಟ್ಯಾಂಕ್ ಮಿಸೇಲ್ಸ್ ಸೇರಿದಂತೆ ಪ್ರಮುಖ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಅಲ್ಲದೆ ಶತ್ರು ಸೈನ್ಯದ ಕ್ಷಿಪಣಿಗಳನ್ನು ಉಡಾಯಿಸಬಲ್ಲ ಲಾಂಚರ್ಗಳನ್ನು ಈ ವಿಶೇಷ ವಾಹನದಲ್ಲಿ ನೀಡಲಾಗಿದೆ. ಈ ಹೊಸ ವಾಹನದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೂತನ ವಾಹನವನ್ನು ಟಾಟಾ ಮೋಟರ್ಸ್ ಇಂಡಿಯನ್ ಆರ್ಮಿಗೆ ಉಡುಗೊರೆಯಾಗಿ ನೀಡಿದೆ ಎನ್ನಲಾಗಿದೆ.
ಭಾರತೀಯ ಸೈನಿಕರಿಗೆ ಗರಿಷ್ಠ ಪ್ರಮಾಣದಲ್ಲಿ ವಾಹನಗಳನ್ನು ನಿರ್ಮಿಸಿ ಕೊಡುತ್ತಿರುವ ಟಾಟಾ ಮೋಟರ್ಸ್ ಇತ್ತೀಚೆಗಷ್ಟೇ ವಿಶೇಷ ಟಾಟಾ ಸಫಾರಿ ಸ್ಟೋರ್ಮ್ ಆರ್ಮಿ ಕಾರುಗಳನ್ನು ಒದಗಿಸಿತ್ತು. ಹೊಸ ಮರ್ಲಿನ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿರುವುದರಿಂದ ದೇಶದ ಸೇನಾ ಬಲ ಮತ್ತಷ್ಟು ಬಲಿಷ್ಠವಾಗಲಿದೆ. ಇದರಿಂದ ಭಾರತೀಯ ಸೇನೆಯು ಗುಡ್ಡಗಾಡು ಪ್ರದೇಶ ಮತ್ತು ನಕ್ಸಲೀಯ ಪ್ರದೇಶಗಲ್ಲಿ ಕಾರ್ಯಾಚರಣೆ ಸಹಕಾರಿಯಾಗಲಿದೆ. ಭಾರತದ ಸೇನೆ ಇಂದು ವಿಶ್ವದ ಪ್ರಬಲ ಸೇನೆಗಳಲ್ಲಿ ಒಂದು. ದೇಶದ ಸೇನೆಯನ್ನು ಬಲಶಾಲಿಗೊಳಿಸಿದಷ್ಟು ಶತ್ರುಗಳು ಹಾಗೂ ಉಗ್ರರು ಬಲಹಿನಗೊಳ್ಳುತ್ತಾರೆ. ನಮ್ಮೆಲ್ಲರನ್ನೂ ಪ್ರಾಣದ ಹಂಗೂ ತೊರೆದು ಕಾಪಾಡುವ ಸೈನಿಕರಿಗೆ ಸದಾ ನಮ್ಮ ಬೆಂಬಲವಿರಲಿ. ನಾವು ನೀಡುವ ಬೆಂಬಲ ಹಾಗೂ ಸ್ಪೂರ್ತಿಯೇ ನಾವು ಸೈನಿಕರಿಗೆ ನೀಡುವ ಗೌರವ ಜೈ ಹಿಂದ್.


Comments
Post a Comment