Breaking news !! ಜೆಡಿಎಸ್ ತ್ಯಜಿಸಿ ಬಿಜೆಪಿ ಗೆ ಬಂದ್ರು ಸಾಲು ಸಾಲು ಮುಖಂಡರು, ಎಷ್ಟು ಮಂದಿ ಎಂದು ನೋಡಿದ್ರೆ ಶಾಕ್ ಆಗ್ತೀರಾ!!!


ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಜೆಡಿಎಸ್ ಮುಖಂಡರು ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ.ಕೆ.ಆರ್.ಮಲ್ಲಿಕಾರ್ಜುನಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದರು.

ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಇಂದ್ರೇಶ್, ಕೊಳ್ಳೇಗಾಲ ತಾಲೂಕು ಎಸ್ಟಿ ಘಟಕ ಅಧ್ಯಕ್ಷ ರೇವಣ್ಣ ನಾಯಕ, ನಿವೃತ್ತ ತಹಸೀಲ್ದಾರ್ ಕರಿಯನಕಟ್ಟೆ ಕೆ.ಎಂ.ನಾಗರಾಜು ಸೇರಿ ಇತರ ಮುಖಂಡರು ಬಿಜೆಪಿ ಸೇರಿದರು.

ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಮಾತನಾಡಿ, ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆ ಹೆಚ್ಚಾಗಿರುವುದರಿಂದ ವಿರೋಧ ಪಕ್ಷಗಳು ಈಗಾಗಲೇ ವಿಚಲಿತವಾಗಿವೆ. ರಾಜ್ಯದಲ್ಲಿ ನಾವು ಒಗ್ಗಟ್ಟಿನಿಂದ ಚುನಾವಣೆ ಎದುರಿಸದಿದ್ದಲ್ಲಿ ಸೋಲು ಖಚಿತ ಎಂದು ಒಲ್ಲದ ಮನಸ್ಸಿನಿಂದ ಅಪ್ಪಿಕೊಂಡಿವೆ. ಆದರೂ ಬಿಜೆಪಿಯನ್ನು ಸೋಲಿಸುವ ಶಕ್ತಿ ವಿರೋಧ ಪಕ್ಷಗಳಿಗೆ ಇಲ್ಲ ಎಂದರು.

ಬಿಜೆಪಿ ಸೇರಿದ ಇಂದ್ರೇಶ್ ಮಾತನಾಡಿದರು. ಜಿ.ಪಂ. ಸದಸ್ಯ ಕಮಲ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನೂರೊಂದುಶೆಟ್ಟಿ, ನಾಗೇಂದ್ರಸ್ವಾಮಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಪುಟ್ಟಸುಬ್ಬಪ್ಪ, ಮುಖಂಡರಾದ ಸುಂದ್ರಪ್ಪ, ಪುರುಷೋತ್ತಮ್, ಮಾಂಬಳ್ಳಿ ನಂಜುಂಡಸ್ವಾಮಿ ಇತರರಿದ್ದರು

Comments