ಕೈತುಂಬಾ ಸಂಬಳ ಬರುತ್ತಿದ್ದ ಐಎಎಸ್ ಹುದ್ದೆ ತೊರೆದು ಮೋದಿಯವರನ್ನ ಗೆಲ್ಲಿಸಲು ಬಿಜೆಪಿ ಸೇರಿದ ಖಡಕ್‌ ಅಧಿಕಾರಿ!



ಸದ್ಯ ಭಾರತ ಮುಂದಿನ ವರ್ಷ ನಡೆಯಲಿರುವ ಅತ್ಯಂತ ಪ್ರತಿಷ್ಠಿತವಾದ ಲೋಕಸಭಾ ಚುನಾವಣೆಗೆ ಸಜ್ಜಾಗುತ್ತಿದೆ. ಎಲ್ಲಾ ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲಲು ತಮ್ಮ ಮಾಸ್ಟರ್ ಪ್ಲಾನ್ ಗಳನ್ನು ರೂಪಿಸುತ್ತಿವೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಂತಹ ಭಾರತೀಯ ಜನತಾ ಪಕ್ಷ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಗೆಲುವಿನ ನಾಗಾಲೋಟವನ್ನು ಹೇಗಾದರೂ ಮಾಡಿ ತಡೆಯಲೇಬೇಕೆಂದು ವಿರೋಧ ಪಕ್ಷಗಳೆಲ್ಲವೂ ಸಜ್ಜಾಗುತ್ತಿವೆ. ಮಹಾ ಮೈತ್ರಿಕೂಟವನ್ನು ರಚಿಸಿ ಕೊಳ್ಳುತ್ತಿವೆ.

ಇನ್ನು ಬಿಜೆಪಿ ನೇತೃತ್ವದ ಎನ್.ಡಿ.ಎ ಮೈತ್ರಿಕೂಟ ಕೂಡ ಸದ್ದಿಲ್ಲದೆ ತನ್ನ ರಣತಂತ್ರವನ್ನು ರೂಪಿಸುತ್ತಿದೆ. ಹೇಗಾದರೂ ಮಾಡಿ ಮತ್ತೊಂದು ಬಾರಿ ಅಧಿಕಾರದ ಗದ್ದುಗೆಗೇರಲು ಮಾಸ್ಟರ್ ಪ್ಲಾನ್ ಗಳನ್ನು ಸಿದ್ಧಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರಾಷ್ಟ್ರದ ಬೇರೆ ಬೇರೆ ಕ್ಷೇತ್ರದ ಲಕ್ಷಾಂತರ ಗಣ್ಯರನ್ನು ಸಂಪರ್ಕಿಸುವ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಚಾಲನೆ ನೀಡಿದ್ದರು. ಹಲವು ಕ್ಷೇತ್ರಗಳಲ್ಲಿರುವ ವಿವಿಧ ಗಣ್ಯರುಗಳನ್ನು ತನ್ನತ್ತ ಸೆಳೆದು ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ವತಿಯಿಂದ ಟಿಕೆಟ್ ನೀಡಿ, ಅತಿ ಹೆಚ್ಚಿನ ಸ್ಥಾನಗಳನ್ನು ಗೆದ್ದು ಕೊಳ್ಳಬೇಕೆಂದು ಬಿಜೆಪಿ ಯೋಚಿಸಿದೆ.

ಇದರ ಹಿನ್ನೆಲೆ ಎಂಬಂತೆ ಇದೀಗ ಖಡಕ್ ಐಎಎಸ್ ಅಧಿಕಾರಿ ಎಂದೇ ಖ್ಯಾತರಾಗಿದ್ದ ಅಪರಾಜಿತಾ ಸಾರಂಗಿ ತಮ್ಮ ಹುದ್ದೆಯನ್ನು ತೊರೆದು ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. 1994 ರಲ್ಲಿ ಐಎಎಸ್ ತೇರ್ಗಡೆ ಯಾಗಿದ್ದಂತಹ ಅಪರಾಜಿತ ತಮ್ಮ ಹಲವಾರು ಖಡಕ್ ನಿರ್ಧಾರಗಳಿಂದಾಗಿ ಪ್ರಸಿದ್ಧಿಯಾಗಿದ್ದರು. ತಮ್ಮ ಹಲವಾರು ಸೇವಾ ಕಾರ್ಯಗಳು ಹಾಗೂ ದಿಟ್ಟ ಆಡಳಿತದಿಂದ ಅಪರಾಜಿತ ಜನರ ಪ್ರಶಂಸೆಗೆ ಒಳಗಾಗಿದ್ದರು. ಒಡಿಶಾ ಮೂಲದವರಾದ ಇವರು ಇದೀಗ ರಾಜಕೀಯ ಕ್ಷೇತ್ರಕ್ಕೆ ಧುಮುಕಿದ್ದು ಬಿಜೆಪಿಯನ್ನು ಸೇರಿದ್ದಾರೆ.
ಐಎಎಸ್ ವೃತ್ತಿಯಲ್ಲಿ ಹಲವು ವರ್ಷಗಳ ಸೇವೆ ಸಲ್ಲಿಸುವ ಅವಕಾಶವಿತ್ತು‌. ಆದರೆ ಕೈತುಂಬಾ ಸಂಬಳ ಬರುತ್ತಿದ್ದ ಹುದ್ದೆಯನ್ನು ತ್ಯಜಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಅಧಿಕಾರಕ್ಕೇರಿಸುವ ಮಹದಾಸೆಯೊಂದಿಗೆ ಬಿಜೆಪಿಯನ್ನು ಸೇರಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇತ್ತೀಚೆಗೆ ಅಪರಾಜಿತಾ ಅವರು ತಮ್ಮ ಐಎಎಸ್ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ, ಅದನ್ನು ಅಂಗೀಕರಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಮೋದಿ ಅವರು ಐಎಎಸ್ ಅಧಿಕಾರಿಯ ಸ್ವಯಂ ನಿವೃತ್ತಿಯ ಪತ್ರವನ್ನು ಅಂಗೀಕರಿಸಿದ್ದರು.



Comments