ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಅವರು, ''ನರೇಂದ್ರ ಮೋದಿ ಮತ್ತೊಂದು ಅವಧಿಗೆ ಪ್ರಧಾನಿ ಆಗಬೇಕು. ನಾವೆಲ್ಲ ಬಿಜೆಪಿ ಕಾರ್ಯಕರ್ತರು,'' ಎಂ¨ದು ಹೇಳಿದ ಮಾತು ವಿವಾದ ಸೃಷ್ಟಿಸಿದೆ.
ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತರ ನಿಯೋಗವೊಂದು ಅವರನ್ನು ಭೇಟಿ ಮಾಡಿ ಅಲಿಗಢ ಕ್ಷೇತ್ರದ ಅಭ್ಯರ್ಥಿ ವಿರುದ್ಧ ಅಸಮಾಧಾನ ತೋಡಿಕೊಂಡಿತ್ತು. ಅವರನ್ನು ಸಮಾಧಾನಿಸುವ ವೇಳೆ ಕಲ್ಯಾಣ್ ಸಿಂಗ್ ಅವರು, ''ನಾವೆಲ್ಲರೂ ಬಿಜೆಪಿ ಕಾರ್ಯಕರ್ತರು. ಬಿಜೆಪಿ ಮತ್ತೊಮ್ಮೆ ಲೋಕಸಭೆ ಚುನಾವಣೆ ಗೆಲ್ಲಬೇಕು ಎನ್ನುವುದು ನಮ್ಮ ಹಂಬಲ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು. ಅವರು ಪ್ರಧಾನಿ ಆಗಿ ಮರು ಆಯ್ಕೆ ಮಾಡುವುದು ರಾಷ್ಟ್ರ ಹಾಗೂ ಸಮಾಜದ ಹಿತದೃಷ್ಟಿಯಿಂದ ತುಂಬ ಮುಖ್ಯ,'' ಎಂದು ಹೇಳಿದ್ದಾರೆ. ಈ ಹೇಳಿಕೆಯ ವಿಡಿಯೋ ಈಗ ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ.
ರಾಜಕೀಯ ಧೋರಣೆಗಳಿಂದ ಮುಕ್ತವಾಗಿ ಇರಬೇಕಾದ ರಾಜ್ಯಪಾಲರು ಈ ರೀತಿ ಒಂದು ಪಕ್ಷದ ಪರ ವಕಾಲತ್ತು ವಹಿಸಿ ಮಾತಾಡಿರುವುದು ಪ್ರತಿಪಕ್ಷಗಳ ತೀವ್ರ ಅಸಮಾಧಾನಕ್ಕೆ ಎಡೆಮಾಡಿಕೊಟ್ಟಿದೆ. ರಾಜ್ಯಪಾಲ ಹುದ್ದೆ ಸಂವಿಧಾನಾತ್ಮಕ ಸವಲತ್ತುಗಳನ್ನು ಹೊಂದಿದ್ದು ಯಾವುದೇ ಪಕ್ಷದ ಪರ ವಾಲಬಾರದು. ಕಲ್ಯಾಣ್ ಸಿಂಗ್ ತಮ್ಮ ಹುದ್ದೆಯ ಘನತೆ ಮೀರಿ ಮಾತಾಡಿದ್ದಾರೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.


Comments
Post a Comment