#Breaking_news !! ಬಾಲಿವುಡ್ ಖ್ಯಾತ ನಟಿ ಕಾಂಗ್ರೆಸ್ ಸೇರ್ಪಡೆ


ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಅವರು ಕಾಂಗ್ರೆಸ್‌ ಸೇರಲಿದ್ದು, ಈಶಾನ್ಯ ಮುಂಬೈ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ ಎಂದು ಅವರ ಕುಟುಂಬದ ಸದಸ್ಯರು ಹೇಳಿದ್ದಾರೆ.

‘ಕಾಂಗ್ರೆಸ್‌ ಜತೆಗಿನ ಮಾತುಕತೆ ಅಂತಿಮ ಹಂತದಲ್ಲಿದೆ. ಮಹಾತ್ಮ ಗಾಂಧೀಜಿ, ಜವಾಹರ್‌ ಲಾಲ್ ನೆಹರೂ ಮತ್ತು ಸರ್ದಾರ್ ಪಟೇಲರ ತತ್ವ ಮತ್ತು ಧ್ಯೇಯಗಳ ಆಧಾರದಲ್ಲಿ ರಾಜಕೀಯಕ್ಕೆ ಬರುತ್ತಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.ಪಕ್ಷವು ಈ ಸಂಬಂಧ ಅಧಿಕೃತ ಘೋಷಣೆ ಮಾಡುವುದು ಬಾಕಿ ಇದೆ.

ಮುಂಬೈ ಈಶಾನ್ಯ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದ ಗೋಪಾಲ್ ಶೆಟ್ಟಿ ಕಣಕ್ಕೆ ಇಳಿಯಲಿದ್ದಾರೆ. ಊರ್ಮಿಳಾ,ಗೋಪಾಲ್ ನಡುವೆ ಪ್ರಬಲ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ ಎನ್ನಲಾಗಿದೆ. 2014ರ ಚುನಾವಣೆಯಲ್ಲಿಗೋಪಾಲ ಶೆಟ್ಟಿ ಕಾಂಗ್ರೆಸ್‌ನ ಸಂಜಯ್ ನಿರುಪಮ್ ವಿರುದ್ಧ ಸ್ಪರ್ಧಿಸಿ, ಗೆದ್ದಿದ್ದರು.

Comments