ಸ್ಪೋಟಕ ಸುದ್ದಿ!! ರಾಹುಲ್ ಗಾಂಧಿಗೆ ಖಡಕ್ ಸವಾಲ್ ಹಾಕಿದ ಬಿಎಸ್ ಯಡಿಯೂರಪ್ಪ



ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ವಿಧಾನಸಭೆಯ ವಿಪಕ್ಷ ನಾಯಕ ಬಿ‌.ಎಸ್. ಯಡಿಯೂರಪ್ಪ ಅವರು ಡೈರಿ ಆರೋಪ ಸಾಬೀತು ಮಾಡಿ, ಇಲ್ವೇ ರಾಜೀನಾಮೆ ನೀಡಿ ಅಂತ ಸವಾಲು ಹಾಕಿದ್ದಾರೆ. ಅವರು ಭಾನುವಾರ ನಗರದಲ್ಲಿ ನಡೆದ ಕಾಂಗ್ರೆಸ್​-ಜೆಡಿಎಸ್​ ಜಂಟಿ ಸಮಾವೇಶದಲ್ಲಿ ರಾಹುಲ್ ​ಗಾಂಧಿ ಬಿ.ಎಸ್ ಯಡಿಯೂರಪ್ಪ ಅವರದ್ದು ಎನ್ನಲಾದ ಡೈರಿ ವಿಚಾರ ಪ್ರಸ್ತಾಪಿಸಿದ್ದರು. ಇದೇ ವೇಳೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಾಧ್ಯಮದ ಹೇಳಿಕೆಯನ್ನು ಬಿಎಸ್‌ವೈ ಬಿಡುಗಡೆ ಮಾಡಿದ್ದಾರೆ.
ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರು ಮೊದಲು ಬೇಜವಬ್ದಾರಿ ಹೇಳಿಕೆಗಳನ್ನು ನಿಲ್ಲಿಸಬೇಕು. ಇಂದು ಬೆಂಗಳೂರಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳೆ ನಕಲಿ ಎಂದು ಹೇಳಿದ 1800 ಕೋಟಿ ಡೈರಿಯ ಬಗ್ಗೆ ಮಾತನಾಡುತ್ತಾ ಅರುಣ್ ಜೇಟ್ಲಿಗೆ, ನಿತಿನ್ ಗಡ್ಕರಿಗೆ, ರಾಜನಾಥ್ ಸಿಂಗ್‌ರಂತಹ ಕಳಂಕರಹಿತ ನಾಯಕರುಗಳಿಗೆ ನೂರಾರು ಕೋಟಿ ಹಣ ಕೊಟ್ಟಿದ್ದೇನೆಂದು ಹೇಳಿ ನನಗೂ ರಾಹುಲ್​​ಗೆ ಯಡಿಯೂರಪ್ಪ ಸವಾಲ್​! ಏನದು ಗೊತ್ತಾ? ಆ ನಾಯಕರುಗಳಿಗೆ ಅವಹೇಳನ ಮಾಡಿದ್ದಾರೆ.
ಇಂತಹ ಬೇಜವಾಬ್ದಾರಿ ಹೇಳಿಕೆಯಿಂದ ರಾಹುಲ್ ಗಾಂಧಿಯವರು ರಾಷ್ಟ್ರದ ಮುಂದೆ ನಗೆಪಾಟಲಿಗೆ ಈಡಾಗಿದ್ದಾರೆ. ರಾಹುಲ್ ಗಾಂಧಿ ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿ ಈ ರೀತಿ ಅಸಂಬದ್ಧ ಹೇಳಿಕೆಗಳು ಅವರ ಘನತೆಗೆ ತಕ್ಕದಲ್ಲ . ರಾಹುಲ್ ಗಾಂಧಿಯವರಿಗೆ ನನ್ನ ಸವಾಲೆಂದರೆ ಅವರ ಹೇಳಿಕೆಗೆ ಬದ್ಧರಾಗಿ ನಮ್ಮ ಮತ್ತು ನಮ್ಮ
ನಾಯಕರುಗಳ ಮೇಲೆ ಮಾಡಿದ ಆಪಾದನೆಯನ್ನು ಸಾಬೀತುಪಡಿಸಿಬೇಕು, ಇಲ್ಲದಿದ್ದರೆ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು.
ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷನಾಗಿ ಹೇಳಿದ ನನ್ನ ಸವಾಲನ್ನು ಸ್ವೀಕರಿಸಬೇಕು, ಒಂದು ವೇಳೆ ನನ್ನ ಮೇಲೆ ಮಾಡಿದ ಆಪಾದನೆ ಸಾಬೀತಾದರೆ ನಾನು ರಾಜಕೀಯ ನಿವೃತ್ತಿಯನ್ನೆ ಪಡೆಯುತ್ತೇನೆ. 1800 ಕೋಟಿ ಡೈರಿ ಬಗ್ಗೆ ಈ ದೇಶದ ಸಂವಿಧಾನ ಬದ್ಧವಾಗಿ ಸ್ಥಾಪಿತವಾದ ಸಂಸ್ಥೆಗಳ ಅಧಿಕಾರಿಗಳು ನಕಲಿ ಎಂದು ಹೇಳಿದ ಮೇಲೂ ರಾಹುಲ್ ಗಾಂದಿ ಮತ್ತು ಅವರ ಪಕ್ಷದ ನಾಯಕರುಗಳು ಈ ದೇಶದ ಕಾನೂನಿನ ಮೇಲೆ ನಂಬಿಕೆ ಇಲ್ಲ ಎಂದು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಅಂತ ಅವರು ಹೇಳಿದ್ದಾರೆ.

Comments