ಖುಷಿ ಸುದ್ದಿ; ಪ್ರಧಾನಿ ಮೋದಿಯವರೊಂದಿಗೆ ಕೈಜೋಡಿಸಿ ದೇಶದ ಜನತೆಗೆ ಭರ್ಜರಿ ಗಿಫ್ಟ್ ಕೊಟ್ಟ ರತನ್ ಟಾಟಾ!! ಏನದು ಗೊತ್ತಾ??
ರತನ್ ಟಾಟಾ ಒಬ್ಬ ಅಪ್ಪಟ ದೇಶಪ್ರೇಮಿ ಉಧ್ಯಮಿ. ಅನ್ಯ ರಾಷ್ಟ್ರಗಳಿಗೆ ಸೆಡ್ಡು ಹೊಡೆದು ವಿಶ್ವಾದ್ಯಂತ ಟಾಟಾ ಸಂಸ್ಥೆ ಬೆಳೆಯುವಂತೆ ಮಾಡಿದ ದೇಶಪ್ರೇಮಿ ಸಂಸ್ಥೆಯ ಮಾಲಿಕ ರತನ್ ಟಾಟಾ. ಉಳಿದ ಉದ್ಯಮಿಗಳ ಬಗ್ಗೆ ಅಷ್ಟಾಗಿ ಗೊತ್ತಿಲ್ಲದೇ ಹೋದರೂ ರತನ್ ಟಾಟಾ ಅವರ ದೇಶಪ್ರೇಮದ ಬಗ್ಗೆ ಬಹುತೇಕರಿಗೆ ಗೊತ್ತಿದೆ. ರತನ್ ಟಾಟಾ ದೇಶಪ್ರೇಮಿ ಆಗಿರೋದ್ರಿಂದಲೋ ಏನೋ ದೇಶಪ್ರೇಮಿ ಪ್ರಧಾನಿ ಮೋದಿಯವರೊಂದಿಗೆ ಕೈ ಜೋಡಿಸಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿಯವರ ಜೊತೆ ವೇದಿಕೆಯನ್ನು ಹಂಚಿಕೊಂಡಿದ್ದಾರೆ.
ಸ್ವಚ್ಛ ಭಾರತ ಎಂಬ ಹೊಸ ಯೋಜನೆಯನ್ನು ಪ್ರಧಾನಿ ಮೋದಿಯವರು ಜಾರಿಗೆ ತರುವ ಮೂಲಕ ದೇಶದ ಜನತೆಯಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದ್ದರು. ಈ ಸ್ವಚ್ಛ ಭಾರತ ಯೋಜನೆಗೆ ರತನ್ ಟಾಟಾ ಕೈಜೋಡಿಸುವ ಮೂಲಕ ದೇಶಪ್ರೇಮವನ್ನು ಮೆರೆದಿದ್ದರು. ಹೌದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2014ರಲ್ಲಿ ಆರಂಭಿಸಿದ ‘ಸ್ವಚ್ಛ ಭಾರತ’ ಅಭಿಯಾನಕ್ಕೆ ಉದ್ಯಮಿ ರತನ್ ಟಾಟಾ ಅವರ ನೇತೃತ್ವದ ಟಾಟಾ ಟ್ರಸ್ಟ್ ಇದುವರೆಗೆ ಬರೋಬ್ಬರಿ ರೂ.100 ಕೋಟಿಗಳನ್ನು ವ್ಯಯಿಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಿದಂತಾಗಿದೆ. ಈ ಕಾರ್ಯದಿಂದ ರತನ್ ಟಾಟಾ ಅವರ ಮೇಲಿದ್ದ ದೇಶಪ್ರೇಮ ನೂರು ಪಟ್ಟು ಜಾಸ್ತಿಯಾಗಿದೆ!!
ಸ್ವಚ್ಛ ಭಾರತ ಅಭಿಯಾನವು ದೇಶದಲ್ಲಿ ಒಂದು ಕ್ರಾಂತಿಕಾರಕ ಹೆಜ್ಜೆ ಇಡುವ ಯೋಜನೆಯಾಗಿ ಮಾರ್ಪಟ್ಟಿತು. ಇಡೀ ದೇಶ ಸ್ವಚ್ಛತೆಯ ಬಗ್ಗೆ ಜಾಗೃತವಾಯ್ತು. ಮೋದಿಯವರು ಯಾವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತಂದಿದ್ದರೋ ಆ ಉದ್ದೇಶ ನಿಧಾನವಾಗಿ ಈಡೇರುತ್ತಿದೆ. ಈ ಅಭಿಯಾನಕ್ಕೆ ರತನ್ ಟಾಟಾ 100 ಕೋಟಿ ರೂಪಾಯಿ ಕೊಟ್ಟು ದೇಶದ ಜನತೆಗೆ ಸಹಾಯ ಆಗುವಂತೆ ಮಾಡಿದ್ದರು. ಇದನ್ನು ಸ್ವತಃ ರತನ್ ಟಾಟಾ ಅವರೇ ಹೇಳಿದ್ದಾರೆ.
ಟಾಟಾ ಟ್ರಸ್ಟ್ ಮುಖ್ಯಸ್ಥ ರತನ್ ಟಾಟಾ ಅವರೇ, ಸ್ವಚ್ಛತಾ ಹೀ ಸೇವಾ ಅಭಿಯಾನದ ಚಾಲನೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಂದರ್ಭ ಈ ಮಾಹಿತಿಯನ್ನು ನೀಡಿದ್ದಾರೆ.


Comments
Post a Comment