ಲೋಕಸಭೆ ಚುನಾವಣೆ ಘೋಷಣೆಯಾಗಿರುವಂತೆಯೇ ರಾಜಕೀಯ ವಲಸೆ ಜೋರಾಗಿದೆ. ಗುಜರಾತ್ ನಲ್ಲಿ ಆಪರೇಷನ್ ಕಮಲದ ಜಾತ್ರೆಯೇ ಶುರುವಾಗಿದ್ದು, 4 ದಿನಗಳ ಅವಧಿಯಲ್ಲಿ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿ ಬಿಜೆಪಿಯ ಪಾಳಯ ಸೇರಿಕೊಂಡಿದ್ದಾರೆ.
ಗುಜರಾತ್ ಜಾಮ್ ನಗರ(ಗ್ರಾಮೀಣ ಕ್ಷೇತ್ರ)ದ ಕಾಂಗ್ರೆಸ್ ಶಾಸಕ ವಲ್ಲಭ್ ಧಾರಾವಿಯಾ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ನಿಂದ ದೂರವಾದ ಶಾಸಕರ ಸಂಖ್ಯೆ ಮತ್ತೆ ಏರಿಕೆಯಾಗಿದೆ.

Comments
Post a Comment