ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿಯಲು ಸಜ್ಜಾಗಿದ್ದ ಮಾಜಿ ಸಚಿವ ವಿಶ್ವನಾಥ್ಗೆ ಹಿನ್ನಡೆಯಾಗಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಅವರು ಆರೋಪಿಸಿದ್ದಾರೆ.
ತನಗೆ ಟಿಕೆಟ್ ಕೈ ತಪ್ಪಿದ್ದಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ಹೆಸರನ್ನು ತಳುಕು ಹಾಕಿರುವ ವಿಶ್ವನಾಥ್, ಪಕ್ಷದ ಒಳಗಡೆ ಹಾಗೂ ಹೊರಗಡೆ ಪಿತೂರಿ ನಡೆದಿದೆ. ಇದನ್ನು ಕೆಲವೇ ದಿನಗಳಲ್ಲಿ ಬಹಿರಂಗ ಪಡಿಸುವೆ ಎಂದು ಕಿಡಿಕಾರಿದ್ದಾರೆ. ಈ ಆರೋಪ ಅಲ್ಲಗೆಳೆದಿರುವ ಸಿದ್ದರಾಮಯ್ಯ, 'ಹಾಗಾದರೆ ಅವನ ಪ್ರಕಾರ ಬಿಜೆಪಿಗೂ ನಾನೇ ಹೈಕಮಾಂಡ್?' ಎಂದು ಲೇವಡಿ ಮಾಡಿದ್ದಾರೆ.
'ಎಂಎಲ್ಸಿ ಚುನಾವಣೆಗೆ ಎಚ್.ವಿಶ್ವನಾಥ್ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ನಾನೇ ಕಾರಣ ಅನ್ನೋದಾದರೆ ಅವನ ಪ್ರಕಾರ ನಾನು ಬಿಜೆಪಿ ಹೈಕಮಾಂಡ್. ಅವನಿಗೆ ಬುದ್ಧಿ ಇಲ್ಲ…' ಎಂದು ಸಿದ್ದರಾಮಯ್ಯ ಏಕವಚನದಲ್ಲೇ ವಿಶ್ವನಾಥ್ ಆರೋಪಕ್ಕೆ ಕಿಡಿಕಾರಿದರು.

Comments
Post a Comment