ಕಾಂಗ್ರೆಸ್ಸಿನ ಮಾಜಿ ಮುಖ್ಯಮಂತ್ರಿ ಸದ್ದಿಲ್ಲದೆ ಬಿಜೆಪಿ ಸೇರ್ಪಡೆ !! ಮುರಿದು ಬಿತ್ತು ಕಾಂಗ್ರೆಸ್ ಬೆನ್ನೆಲುಬು!! ಸೋನಿಯಾ ಫುಲ್ ಗರಂ
ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಆಗಿದ್ದ ಅವರು ಸೆಪ್ಟೆಂಬರ್ 1ರಂದು ಬಿಜೆಪಿ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
ಕಾಂಗ್ರೆಸ್ ತೊರೆದ ಬಳಿಕ ಮಹಾರಾಷ್ಟ್ರ ಸ್ವಾಭಿಮಾನ್ ಪಕ್ಷ ಸ್ಥಾಪಿಸುವ ಮೂಲಕ ಎನ್‌ಡಿಎ ಭಾಗವಾಗಿದ್ದ ರಾಣೆ, ಬಿಜೆಪಿ ಬೆಂಬಲದೊಂದಿದೆ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಈ ಕುರಿತು ಪತ್ರಕರ್ತರ ಜತೆ ಮಾತನಾಡಿರುವ ನಾರಾಯಣ ರಾಣೆ, ‘ನಾನು ಸೆಪ್ಟೆಂಬರ್ 1ರಂದು ಮಹಾರಾಷ್ಟ್ರದ ಸೋಲ್ಹಾಪುರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಕದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಅಷ್ಟೆ ಅಲ್ಲದೆ, ಎನ್‌ಸಿಪಿ ಶಾಸಕ ರಾಣಾ ಜಗಜೀತಸಿಂಹ ಪಾಟೀಲ್ ಮತ್ತು ಸತಾರಾ ಸಂಸದ ಉದಯನರಾಜೆ ಭೋಸಲೆ ಅವರು ಕೂಡ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments
Post a Comment